== ಸಾಹಿತ್ಯಶ್ರೀ ಪ್ರಶಸ್ತಿ == ಕನ್ನಡ ಸಾಹಿತ್ಯಕ್ಕೆ ನೀಡಿರುವ ಈವರೆಗಿನ ಗಮನಾರ್ಹವಾದ ಸೇವೆಯನ್ನು ಪರಿಗಣಿಸಿ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2017ನೇ ವರ್ಷದಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಹೊಸದಾಗಿ ನೀಡಲಾಗುತ್ತಿದೆ. ಈ ಪ್ರಶಸ್ತಿಗೆ ₹25,000 ನಗದು ಹಾಗೂ ಪ್ರಮಾಣಪತ್ರದೊಂದಿಗೆ ಶಿಲಾಶಾಸನ ಬರೆಯುವ ಮಹಿಳೆಯ ಪುತ್ತಿಗೆಯನ್ನು ನೀಡುವುದಲ್ಲದೆ ಶಾಲು, ಹಾರಗಳೊಂದಿಗೆ ಸನ್ಮಾನಿಸಲಾಗುತ್ತದೆ. == ಗೌರವ ಪ್ರಶಸ್ತಿ == ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಐವರು ಹಿರಿಯ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷವೂ ಗೌರವ ಪ್ರಶಸ್ತಿಯನ್ನು ₹50,000 ನಗದು, ಫಲಕ, ಶಾಲು ಹಾರ ಹಾಗೂ ಪ್ರಮಾಣ ಪತ್ರದೊಂದಿಗೆ ನೀಡುತ್ತದೆ. ಕೆಲವೊಮ್ಮೆ ಗಮಕ ಕಲೆಯ ಬೆಳವಣಿಗೆಗೆ ಕೊಡುಗೆ ನೀಡಿದ ಗಮಕಿಗಳಿಗೂ ಈ ಗೌರವ ನೀಡಲಾಗಿದೆ.